ಅನುಷಾ ರೈ (ಮೇ ೪ ರಂದು ತುಮಕೂರುನಲ್ಲಿ ಜನಿಸಿದ್ದರು ಭಾರತೀಯ ನಟಿ, ಮುಖ್ಯವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಇವರು ಮಾಡೆಲ್ ಹಾಗೂ ನೃತ್ಯಗಾರ್ತಿ. ಅವರು ಅಣ್ಣಯ್ಯ ಸೀರಿಯಲ್ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. == ವೃತ್ತಿ == ಅನುಷಾ ರೈ ಅವರು ಹನುಮಂತ್ ರಾಜ್ ಮತ್ತು ಭಾಗ್ಯ ದಂಪತಿಗೆ ಜನಿಸಿದರು. ತನ್ನ ಪ್ರೌಡ ಶಾಲೆ ಯನ್ನು ತುಮಕೂರುನಲ್ಲಿ ಮುಗಿಸಿದ ನಂತರ ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಓದಿದರೂ. ಸಂಗೀತದ ಬಗ್ಗೆ ಅವಳ ಉತ್ಸಾಹದಿಂದಾಗಿ ಅವಳು ಹಂಸಲೇಖ ಶಾಲೆಯಲ್ಲಿ ಸಂಗೀತ ಕಲಿಯಲು ಪ್ರಾರಂಭಿಸಿದಳು. ಮಹಾನುಭಾರು ಚಿತ್ರದ ಮೂಲಕ ಅವರು ಪಾದಾರ್ಪಣೆ ಮಾಡಿದರು. ಅವರು ಕಾಲೇಜು ರಾಂಪ್ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು ಮತ್ತು ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದರು. ಈಗ ಅವರು ರಾಜಕುಮಾರಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ ಅನುಷಾ ಅವರು ನಿಖಿಲ್ ಕುಮಾರಸ್ವಾಮಿ ಅವರ ರೈಡರ್ ಚಿತ್ರದಲ್ಲೂ ಸಹ ಅಭಿನಯಿಸುತ್ತಿದ್ದಾರೆ . == ಚಿತ್ರಕಥೆ == == ಧಾರಾವಾಹಿ == == ಉಲ್ಲೇಖಗಳು ==